ಚನ್ನಪ್ಪ ಚನ್ನೆಗೌಡ

ಜಾನಪದ

ಚನ್ನಪ್ಪ ಚನ್ನೆಗೌಡ | ಕುಂಬಾರ ಮಾಡಿದ ಕೊಡನವ್ವ

ಚೆಂದಕೆ ತಂದೇನೆ ತಂಗಿ | ನೀರಿಗೆ ಬಂದೇನೆ || ಪ ||

ಅರು ಮೂರು ಒಂಭತ್ತು | ಒಂಭತ್ತು ತೂತಿನ ಕೊಡನವ್ವ

ಚೆಂದಕ ತಂದೇನೆ ತಂಗಿ | ನೀರಿಗೆ ಬಂದೇನೆ ||

ಬಾಳಿಯ ಬನದಾಗ ನಾ | ಹೆಂಗ ಬಾಗಿ ಬರಲೆವ್ವ

ಚೆಂದಕ ತಂದೇನೆ ತಂಗಿ | ನೀರಿಗೆ ಬಂದೇನೆ ||

ಲಿಂಬಿಯ ವನದಾಗ ನಾ ಹೆಂಗ ನಂಬಿ ಬರಲೆವ್ವ

ಚೆಂದಕ ತಂದೇನೆ ತಂಗಿ | ನೀರಿಗೆ ಬಂದೇನೆ ||

ದ್ಯಾವಮ್ಮನ ಗುಡಿಮುಂದ ಒಬ್ಬ ಮುದುಕ ಕುಂತಿದ್ದಾ

ಗಾಂಜಾ ಸೇದತ್ತಿದ್ದಾ ಪಟಕಾ ಸುತ್ತಿದ್ದಾ ||

ಹುಯಿಲಗೋಳ ಕೆರಿಯಾಗ ನೀರು ತರುವಾಗ

ಕಲ್ಲ ತಾಕಿತ ತಂಗಿ ಕೊಡವು ಒಡೆಯಿತ ||

ಎವ್ವಾ ಇವನ್ಯಾರ ಮಂಚದ ಮ್ಯಾಲ ಮಲಗ್ಯಾನ

ಗೊತ್ತಿಲ್ಲೇನವ್ವಾ ತಂಗಿ ಶಿಶುನಾಳ ಶರೀಫಜ್ಜ

ಚೆಂದಕ ತಂದೇನೆ ತಂಗಿ | ನೀರಿಗೆ ಬಂದೇನೆ ||